
3rd April 2025
ಯಾದಗಿರಿ : ಬುಧವಾರ ಬೆಳಿಗ್ಗೆ ೧೧ ಕ್ಕೆ ಯಾದಗಿರಿಯಿಂದ ಹತ್ತಿಕುಣಿ ಗ್ರಾಮಕ್ಕೆ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ಟಂ ಟಂಗೆ ಬಂದಳ್ಳಿ ಗ್ರಾಮದ ಕೆರೆಯ ಹತ್ತಿರ ವಾಹನಕ್ಕಿ ನಾಯಿ ಅಡ್ಡ ಬಂದ ಪರಿಣಾಮ ಚಾಲಕ ತುರ್ತಾಗಿ ಬ್ರೆಕ್ ಹಾಕಿದ್ದಾನೆ, ಪರಿಣಾಮ ಪಲ್ಟಿಯಾಗಿ ೪ ಜನರಿಗೆ ಗಾಯಗಳಾಗಿವೆ, ೩ ವರ್ಷದ ಮಗು ಆದಿ ಸಾವನ್ನಪ್ಪಿದ್ದಾನೆ.
ಟಂ ಟಂನಲ್ಲಿ ಚಾಲಕ ದೇವಿಂದ್ರಪ್ಪ ಹತ್ತಿಕುಣಿ ತನ್ನ ಪತ್ನಿ ಕಾವೇರಿ ಪುತ್ರನ ಜೊತೆಗೆ ಸಾಬಣ್ಣ ನೀಲಹಳ್ಳಿ, ಅಂಜಮ್ಮ, ಪ್ರಕಾಶ, ಬಸವರಾಜ ಗಾಯಗೊಂಡಿದ್ದಾರೆ, ಅವರಲ್ಲಿ ಚಿಕ್ಕ ಮಗು ಗಂಭೀರ ಗಾಯಗೊಂಡಿದ್ದು, ಚಾಲಕ ಆ ಮಗುವನ್ನು ತುರ್ತಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ, ದಾರಿ ಮಧ್ಯೆ ಮಗು ಆದಿ ದೇವಿಂದ್ರಪ್ಪ ಹತ್ತಿಕುಣಿ ಸಾವನ್ನಪ್ಪಿದ್ದಾನೆ, ಉಳಿದವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ,
ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಹಣಮಂತ ಬಂಕಲಗಿ ಆಗಮಿಸಿ, ಘಟನೆ ವಿಕ್ಷೀಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ,
ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ